Pages

Saturday 4 January 2014

ಚಿಗುರು...







ಕಂಬಕ್ಕೆ ಒರಗಿ ಕೂತವಳಿಗೆ 
ಒಂದು ಕ್ಷಣ ಒಮ್ಮಲೇ ಹೊಟ್ಟೆ ನೋವು, 
ಹೊಟ್ಟೆ ಮೇಲೆ ಕೈ ಆಡಿಸಿಕೊಂಡು ನಿಟ್ಟುಸಿರು ಬಿಟ್ಟ ಅವಳು, 
ಒಂದು ಕ್ಷಣ ಸಣ್ಣದಾಗಿ ತನ್ನಷ್ಟಕ್ಕೆ ತಾನೇ ನಕ್ಕು ಮಗುವಿಗೆ  ಸ್ವೆಟರ್ ಹೊಲಿಯೋದನ್ನ ಮುಂದುವರಿಸಿದಳು.... 

ಲುಸಿಯಾ ಚಿತ್ರದ ಬಗ್ಗೆ


"ಕನ್ನಡ ಮದರ್ರಂಗೆ ಇಂಗ್ಲಿಷ್ ಲವರ್ರಂಗೆ ಕಟ್ಕೋತಾಳೋ ಬಿಟ್ಟೋಯ್ತಾಳೋ ಗೊತ್ತಿಲ್ಲಕಮಿ "

ಒಂದು ಕಥೆ ಒಂದು ಹಾಡು ಯಾವುದೋ ಸಾಲು ನಿಮ್ಮನ್ನ ಕಾಡದಿದ್ದರೆ ಅದಕ್ಕೆ ಅಷ್ಟೊಂದು ಗಟ್ಟಿತನ ಇಲ್ಲ ಅಂತಾನೆ ಅರ್ಥ. ನಿನ್ನೆ ತಾನೇ ಲುಸಿಯಾ ಸಿನೆಮಾ ನೋಡಿ ಬಂದೆ. ತುಂಬಾ ವಿಭಿನ್ನ ಮತ್ತು ಅಷ್ಟೇ ಮನಸಿನ ಆಳದಲ್ಲಿ ಇಳಿಯಬಲ್ಲಾಂತ ಸಿನೆಮಾ. ಇಂಥ ಚಿತ್ರಗಳು ಕನ್ನಡದ ಮಟ್ಟಿಗೆ ತುಂಬಾ ಅಪರೂಪ. ಇನ್ನೂ ಶೂಟಿಂಗ್ ನಡೆಯುತ್ತಿರುವಾಗಲೇ ಇಂಗ್ಲೆಂಡನ ಬ್ರಿಟಿಷ್ ಕೌನ್ಸಿಲ್ ಸಂಸ್ಥೆ ನೀಡೋ 'ಕ್ರಿಯೇಟಿವ್ ನ್ಯೂ ಬಿಸಿನೆಸ್ಸ್ ಐಡಿಯಾ ಅವಾರ್ಡ್'ನ್ನ 150 ಚಿತ್ರಗಳ ಪೈಪೋಟಿ ನಡುವೆ ಗೆದ್ದುಕೊಂಡು ಹೊಸಬಗೆಯ ಕುತೂಹಲವನ್ನ ಹುಟ್ಟು ಹಾಕಿತ್ತು. ಈಗ ಜನರ ಮನಸನ್ನ ಗೆಲ್ಲುವಲ್ಲಿ ಯಶಸ್ವಿ ಆಗಿದೆ ಅಂತಾನೆ ಹೆಳ್ಬಹುದು.


ಕಥೆ,ಹಾಡು,ಛಾಯಾಗ್ರಹಣ, ಸಾಹಿತ್ಯ, ಪ್ರಮುಖವಾಗಿ ಎಡಿಟಿಂಗ್ ವಿಭಾಗ ತುಂಬಾ ಸ್ಟ್ರಾಂಗ್ ಆಗಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಇದೆ ನಿಜ . ಆದರೆ ಅವರಿವರ ಮಾತು ಕೇಳೋದಕಿಂತ ಇಂತ ಚಿತ್ರಗಳನ್ನ ಒಂದು ಸಲ ಥಿಯೇಟರ್ ನಲ್ಲಿ ಕುಳಿತು ನೋಡೋದು ಒಳ್ಳೇದು. ಇದರಿಂದ ಕನ್ನಡ ಇಂಡಸ್ಟ್ರಿಗೆ ಒಳ್ಳೇದು ಹಾಗೆ ಹೀಗೆ ಅಂತಲ್ಲ, ಆದರೆ ನಿಮಗೊಂದು ಒಳ್ಳೆ ಎಂಟರ್ಟೈನ್ಮೇಂಟ್ ಕಂಡಿತ ಸಿಗತ್ತೆ..

ಇದರಲ್ಲಿ ಕಾಮಿಡೀ,ಸಸ್ಪೆನ್ಸೆ ,ಮೆಸೇಜ್,ಉತ್ತಮ ಸಂಗೀತ ಹೀಗೆ ಎಲ್ಲವೂ ಇದೆ. ಪವನ ಅವರು ಕನಸನ್ನ ತೋರಿಸುವಾಗ ಕನಸಿನ ಎಲ್ಲ ಆಯಾಮಗಳನ್ನ ತಿಳಿದುಕೊಂಡೆ ತೆರೆ ಮೇಲೆ ತಂದಿದ್ದರೆ. ಕೆಲವೊಂದು ಚಿಕ್ಕ ಪುಟ್ಟ ವಿಷಯಗಳನ್ನು ಕೂಡ ಪವನ್ ಅವರು ಬಿಟ್ಟಿಲ್ಲ. ತಾರಗಣಕ್ಕೆ ಫುಲ್ ಮಾರ್ಕ್ಸ್.

ಒಟ್ಟಾರೆ ನಾ ಕೊಟ್ಟ ದುಡ್ಡಿಗೆ ಸಮಯಕ್ಕೆ ಚಿತ್ರದ ಯಾವುದೇ ವಿಭಾಗದಿಂದಲೂ ಮೋಸವಾಗಿಲ್ಲ ಅಷ್ಟು ಮಾತ್ರ ಹೆಳ್ಬಲ್ಲೆ. ಸಾದ್ಯವಾದ್ರೆ ನೀವು ಒಂದು ಸಲ ನೋಡಿಬನ್ನಿ... 


15/09/2013 ರಂದು   ಬರೆದುಕೊಂಡಿದ್ದು. .